ಮೇಲುಕೋಟೆ: ಮಳೆರಾಯನ ಜೊತೆ ಮಾತುಕಥೆ | PAYANIGA

ಮೇಲುಕೋಟೆ: ಮಳೆರಾಯನ ಜೊತೆ ಮಾತುಕಥೆ

ಮೇಲುಕೋಟೆ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಇವೆರೆಡೇ – ಒಂದು ವೈರಮುಡಿ ಉತ್ಸವ, ಮತ್ತೊಂದು ‘ಪುಳಿಯೋಗರೆ’. ಎಂದಿನಂತೆ ಹೋಗುವ ಮಂಡ್ಯ-ಜಕ್ಕನಹಳ್ಳಿ ಕ್ರಾಸ್ ಕಡೆಯಿಂದ ಹೋಗುವ ಬದಲು ಮತ್ತೊಂದು ದಿಕ್ಕಿನಿಂದ ಮೇಲುಕೋಟೆಗೆ ನಮ್ಮ ಪಯಣ ಸಾಗಿತ್ತು. ಬೆಳಿಗ್ಗೆ ಬಲಮುರಿ, ಕೆ.ಅರ್.ಎಸ್. ನೋಡಿಕೊಂಡು ಚಿನಕುರಳಿ (ಪಾಂಡವಪುರ ಬಳಿ ಈ ಹೆಸರಿನ ಊರೊಂದಿದೆ) ಮೂಲಕ ಚೆಲುವನಾರಾಯಣನ ಸನ್ನಿಧಿಗೆ ಸಾಗಿದ್ದೆವು….

Continue Reading
ಮಡಿಕೇರಿ ಮೇಲ್ ಮಂಜು | PAYANIGA

ಮಡಿಕೇರಿ ಮೇಲ್ ಮಂಜು

ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ಟ್ವಿಟ್ಟರಿನಲ್ಲಿ ‘ಮಡಿಕೇರಿ ಮೇಲ್ ಮಂಜು’ ಕವನದ ಸಾಹಿತ್ಯ ಬೇಕಿತ್ತು ಎಂದು ಕೇಳಿದಾಗ, ತಕ್ಷಣ ನೆನಪಿಗೆ ಬಂದದ್ದು ಹೋದ ವರ್ಷದ ನನ್ನ ಅನುಭವ. ಕಳೆದ ವರ್ಷ ಏಪ್ರಿಲ್ಲಿನಲ್ಲಿ, ಬೆಂಗಳೂರಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲೆಂದು ಮಡಿಕೇರಿಗೆ ಹೊರಟರೆ ಅಲ್ಲೂ ಅಷ್ಟೇ ಬಿಸಿಲು. ಆದರೆ ಸಂಜೆಯಾಗುತ್ತಿದ್ದಂತೆ ಶುರುವಾದ ತಂಗಾಳಿ, ಬೆಂಗಳೂರಿಗೂ ಮಡಿಕೇರಿಗೂ ಇರುವ ವ್ಯತ್ಯಾಸ ತೋರಿಸಿತ್ತು….

Continue Reading
ಮಾರ್ಕೋನಹಳ್ಳಿಯ ಶಿಂಷಾ | PAYANIGA

ಮಾರ್ಕೋನಹಳ್ಳಿಯ ಶಿಂಷಾ

ನದಿಗಳು, ಅದರಲ್ಲೂ ಕರ್ನಾಟಕದ ನದಿಗಳು ಅಂದಾಕ್ಷಣ ನನಗೆ ಮೊದಲು ನೆನಪಿಗೆ ಬರುವುದು ಶಿಂಷಾ. ಬಹುಶಃ ನಾನು ನೋಡಿದ, ಲೆಕ್ಕವಿಲ್ಲದಷ್ಟು ಬಾರಿ ನೀರಿನಲ್ಲಿ ಆಡಿದ ಮತ್ತು ಮಿಂದ ಮೊದಲ ನದಿಯಾದದ್ದರಿಂದ ಇರಬಹುದು. ಅಥವಾ ಶಾಲೆಯಲ್ಲಿದ್ದಾಗ ಪ್ರತಿ ರಸಪ್ರಶ್ನೆಯಲ್ಲೂ ಕೇಳುತ್ತಿದ್ದ – “ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ಮೂರು ನದಿಗಳು ಯಾವುವು?” – ಎಂಬ ಪ್ರಶ್ನೆಯಿಂದ ಇದ್ದಿರಬಹುದು. ಕಾವೇರಿಯ ಉಪನದಿಯಾದ…

Continue Reading
ಕೈದಾಳದ ಚನ್ನಕೇಶವ | PAYANIGA

ಕೈದಾಳದ ಚನ್ನಕೇಶವ

ಕರ್ನಾಟಕದ ಇತಿಹಾಸದಲ್ಲಿ ಸಾಹಿತ್ಯ, ಕಲೆ ಮತ್ತು ಶಿಲ್ಪಕಲೆಗಳಿಗೆ ಹೊಯ್ಸಳರ ಕೊಡುಗೆ ಅಪಾರ. ಸುಮಾರು 300-350 ವರ್ಷಗಳ ಕಾಲ ಕರ್ನಾಟಕ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ಹೊಯ್ಸಳರು, ಸುಮಾರು ಸಾವಿರಕ್ಕೂ ಹೆಚ್ಚು ಕಟ್ಟಿಸಿದರು. ಬೇಲೂರು, ಹಳೆಬೀಡು, ಸೋಮನಾಥಪುರ, ನುಗ್ಗೇಹಳ್ಳಿ, ಬೆಳವಾಡಿ, ದೊಡ್ಡಗದ್ದವಳ್ಳಿ – ಹೀಗೆ ದೇವಸ್ಥಾನಗಳ ಪಟ್ಟಿ ಕೊನೆಯಿಲ್ಲದ್ದು. ಹೊಯ್ಸಳ ಶಿಲ್ಪಕಲೆ ಎಂದಾಕ್ಷಣ ನೆನಪಿಗೆ…

Continue Reading
ರಾಮ-ಹನುಮರ ವಿರುಪಾಪುರ | PAYANIGA

ರಾಮ-ಹನುಮರ ವಿರುಪಾಪುರ

ವಿರುಪಾಪುರ, ನಮ್ಮ ಹಳ್ಳಿಯಿಂದ ಈಶಾನ್ಯಕ್ಕೆ ಸುಮಾರು ಒಂದು ಮೈಲಿ ದೂರದಲ್ಲಿರೋ ಒಂದು ಸಣ್ಣ ಹಳ್ಳಿ. ನಮ್ಮೂರೇ ಚಿಕ್ಕದು ಅಂದರೆ ವಿರುಪಾಪುರ ಮತ್ತೂ ಸಣ್ಣ ಊರು. ಹಳ್ಳಿಯ ಉತ್ತರಕ್ಕೆ, ರಸ್ತೆಯ ಮಗ್ಗುಲಿಗೇ ಒಂದು ಸಣ್ಣ ಗುಡ್ಡ. ದಾಪುಗಾಲು ಹಾಕುತ್ತಾ ಹತ್ತಿದರೆ 15-20 ನಿಮಿಷಗಳಲ್ಲೇ ತುದಿಯಲ್ಲಿರುವ ಮಂಟಪ ತಲುಪುವಷ್ಟು ಸಣ್ಣದು. ಗುಡ್ಡ ಚಿಕ್ಕದಾದರೂ ನನ್ನಲ್ಲಿ ಊರೂರು ಸುತ್ತುವ, ಬೆಟ್ಟ-ಗುಡ್ಡಗಳಲ್ಲಿ…

Continue Reading