ಕೈದಾಳದ ಚನ್ನಕೇಶವ

ಪಯಣಿಗ - ಕೈದಾಳದ ಚನ್ನಕೇಶವ

ಕರ್ನಾಟಕದ ಇತಿಹಾಸದಲ್ಲಿ ಸಾಹಿತ್ಯ, ಕಲೆ ಮತ್ತು ಶಿಲ್ಪಕಲೆಗಳಿಗೆ ಹೊಯ್ಸಳರ ಕೊಡುಗೆ ಅಪಾರ. ಸುಮಾರು 300-350 ವರ್ಷಗಳ ಕಾಲ ಕರ್ನಾಟಕ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ಹೊಯ್ಸಳರು, ಸುಮಾರು ಸಾವಿರಕ್ಕೂ ಹೆಚ್ಚು ಕಟ್ಟಿಸಿದರು. ಬೇಲೂರು, ಹಳೆಬೀಡು, ಸೋಮನಾಥಪುರ, ನುಗ್ಗೇಹಳ್ಳಿ, ಬೆಳವಾಡಿ, ದೊಡ್ಡಗದ್ದವಳ್ಳಿ – ಹೀಗೆ ದೇವಸ್ಥಾನಗಳ ಪಟ್ಟಿ ಕೊನೆಯಿಲ್ಲದ್ದು. ಹೊಯ್ಸಳ ಶಿಲ್ಪಕಲೆ ಎಂದಾಕ್ಷಣ ನೆನಪಿಗೆ ಬರುವುದು ರಾಜಾ ವಿಷ್ಣುವರ್ಧನನ ಪ್ರೋತ್ಸಾಹ ಮತ್ತು ಶಿಲ್ಪಕಲಾಕೌಶಲ್ಯದ ರೂವಾರಿ, ಜಕಣಾಚಾರಿಯ ದಂತಕಥೆ.

ಪಯಣಿಗ - ಕೈದಾಳದ ಚನ್ನಕೇಶವ

ಪಯಣಿಗ - ಕೈದಾಳದ ಚನ್ನಕೇಶವ

ತುಮಕೂರು ಜಿಲ್ಲೆಯಲ್ಲಿನ ಕೈದಾಳ, ಈ ಹೊಯ್ಸಳ ಶೈಲಿಯ ದೇವಸ್ತಾನಗಳ ಪಟ್ಟಿಗೆ ಸೇರುವ ಮತ್ತೊಂದು ಹಳ್ಳಿ. ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸಿಗುವ ಗೂಳೂರಿನಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ. ಚಲಿಸಿದರೆ ಕೈದಾಳ ಸಿಗುತ್ತದೆ. ಹೊಯ್ಸಳ ಶೈಲಿಯ ಶಿಲಾಬಾಲಿಕೆ-ಕೆತ್ತನೆಗಳನ್ನು ಹುಡುಕಿ ಇಲ್ಲಿಗೆ ಬಂದರೆ ನಿರಾಶೆ ಖಂಡಿತ. ಹೊರಗಿನಿಂದ
ಸಾಧಾರಣ ದೇಗುಲದಂತೆ ಕಂಡರೂ, ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹದ ಕೆತ್ತನೆ ಕಣ್ಸೆಳೆಯುತ್ತದೆ. ಸುಮಾರು 6 ಅಡಿ ಎತ್ತರವಿರುವ ಕಪ್ಪು ಶಿಲೆಯ ಚನ್ನಕೇಶವ ಸ್ವಾಮಿ ಎಲ್ಲ ದೇವಸ್ತಾನಗಳಂತೆ ಪೂರ್ವಾಭಿಮುಖವಾಗಿರುವ ಬದಲು, ಇಲ್ಲಿ ಪಶ್ಚಿಮಾಭಿಮುಖವಾಗಿದೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆ ಶಿಲ್ಪಿಯ ಕರಕುಶಲತೆಯನ್ನು ಎತ್ತಿ ತೋರುತ್ತದೆ.

ಪಯಣಿಗ - ಕೈದಾಳದ ಚನ್ನಕೇಶವ

ಪುರಾಣ, ದಂತಕಥೆಗಳ ಪ್ರಕಾರ ಕೈದಾಳ (ಮೊದಲಿಗೆ ಕ್ರೀಡಿಕಾಪುರ) ಜಕಣಾಚಾರಿ ಹುಟ್ಟಿದ ಸ್ಥಳ. ತಾನು ಕೆತ್ತಿದ ಬೇಲೂರಿನ ಚನ್ನಕೇಶವ (ಕಪ್ಪೆ ಚನ್ನಿಗರಾಯ) ವಿಗ್ರಹದಲ್ಲಿನ ದೋಷಕ್ಕಾಗಿ ತನ್ನ ಕೈಯನ್ನು ಬಲಿ ಕೊಟ್ಟ ಜಕಣಾಚಾರಿ, ದೈವೇಚ್ಛೆಯಂತೆ ತನ್ನ ಹುಟ್ಟಿದೂರಿನಲ್ಲಿ ಮತ್ತೊಂದು ದೇವಸ್ಥಾನ ನಿರ್ಮಿಸಿ ಕೈ ಮರಳಿ ಪಡೆಯುತ್ತಾನೆ. ಕೈ ಮರಳಿ ಬಂದಿದ್ದರಿಂದ ಕ್ರೀಡಿಕಾಪುರ ಮುಂದೆ ಕೈದಾಳವಾಗಿ ಮಾರ್ಪಟ್ಟಿತು ಎನ್ನಲಾಗುತ್ತದೆ. ಜಕಣಾಚಾರಿಯ ಜೀವನದ ಕೊನೆಯ ದಿನಗಳಲ್ಲಿ ಕೈದಾಳದ ದೇವಸ್ತಾನವನ್ನು ಕಟ್ಟಲಾಯಿತೆಂದೂ, ಅದರಿಂದಾಗಿ ದೇವಸ್ಥಾನದ ಹೊರಗಿನ ಕೆತ್ತನೆ ನಡೆಯಲಿಲ್ಲವೆಂದು ಪ್ರತೀತಿ. ಒಂದು ದಂತಕಥೆ ಈ ರೀತಿಯದ್ದಾರೆ, ಕೆಲವರ ತರ್ಕದ ಪ್ರಕಾರ, ಜಕಣಾಚಾರಿ ಎನ್ನುವ ಶಿಲ್ಪಿ ಬದುಕಿರಲೇ ಇಲ್ಲ ಎನ್ನುವುದು.

7 comments

  1. ನಮಸ್ಕಾರ ಪ್ರಶಾಂತ್,
    ಇದೊಂದು ಸರ್ಪ್ರೈಸ್! ಚಕಿತಗೊಂಡೆ. ಬಹಳ ಸಂತೋಷವೂ ಆಯಿತು.
    ಉತ್ತಮ ಆರಂಭ. ನಾನಂತೂ ಇಲ್ಲಿ ಯಾವಗಲೂ ಹಾಜರು.

    1. ನಮಸ್ಕಾರ ಪ್ರಶಾಂತ್,
      ಇದೊಂದು ಸರ್ಪ್ರೈಸ್! ಚಕಿತಗೊಂಡೆ. ಬಹಳ ಸಂತೋಷವೂ ಆಯಿತು.
      ಉತ್ತಮ ಆರಂಭ. ನಾನಂತೂ ಇಲ್ಲಿ ಯಾವಗಲೂ ಹಾಜರು.
      ರಾಜೇಶ್ ನಾಯ್ಕ.

      1. ಧನ್ಯವಾದಗಳು ರಾಜೇಶ್. ಇದಕ್ಕೆ ಪ್ರೇರಣೆ ಯಾರು ಅಂತ ನಾನು ಬಿಡಿಸಿ ಹೇಳೋದು ಬೇಕಿಲ್ಲ ಅಲ್ಲವೇ? 🙂

  2. Can you give English version of your site to understand best by non Kannadigas. Pl. inform the relevant link if possible

Leave a Reply